೧೯೦೪-೬೬. ಇಂಗ್ಲಿಷ್ ಕಾದಂಬರಿಕಾರ್ತಿ. ಜನನ ಲಂಡನ್ನಿನಲ್ಲಿ. ತಂದೆಯೂ ಬರೆಹಗಾರ. ಅನೇಕ ಪತ್ತೆದಾರಿ ಕಾದಂಬರಿಗಳನ್ನು ಬರೆದಳು. ೧೯೨೭ರಲ್ಲಿ ಕಲಾವಿದ ಯಂಗ್ ಮನ್ ಕಾರ್ಟರ್ ನನ್ನ  ಮದುವೆಯಾದಳು. ಆಕೆ ಚಿತ್ರಿಸಿದ ಪತ್ತೆದಾರ ಆಲ್ಬರ್ಟ್ ಕ್ಯಾಂಪಿಯನ್ ಬಹಳ ಜನಪ್ರಿಯನಾದ. 

ದಿ ಕ್ರೈಮ್ ಅಟ್ ಬ್ಲಾಕ್ ಡಡ್ಲಿ (೧೯೨೯), ಫ್ಲವರ್ ಫಾರ್ ದಿ ಜಜ್ (೧೯೩೬), ಮೋರ್ ವರ್ಕ್ ಫಾರ್ ದಿ ಅಂಡರ್ಟೇಕರ್ (೧೯೪೯), ದಿ ಟೈಗರ್ ಇನ್ ದಿ ಸ್ಮೋಕ್ (೧೯೫೨), ನೋ ಲವ್ ಲಾಸ್ಟ್ (೧೯೫೪)- ಇವು ಈಕೆಯ ಪ್ರಮುಖ ಕಾದಂಬರಿಗಳು. ಮಿಸ್ಟರ್ ಕ್ಯಾಂಪಿಯನ್ ಅಂಡ್ ಅದರ್ಸ್ (೧೯೩೯) ಈಕೆಯ ಕಥಾ ಸಂಕಲನ.	

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ